ಶ್ರವಣಬೆಳಗೊಳ (ಹಾಸನ ಜಿಲ್ಲೆ), ಮಾರ್ಚ್ ೧೪, ೨೦೧೭: ಶ್ರವಣಬೆಳಗೊಳ ಬಾಹುಬಲಿ ಮಹಾಮಸ್ತಕಾಭಿಷೇಕ – ೨೦೧೮ ರ ಲಾಂಛನವನ್ನು ಮಹೋತ್ಸವದ ರಾಜ್ಯ ಸರ್ಕಾರದ ಸಮಿತಿಯ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಶುಸಂಗೋಪನಾ ಸಚಿವರಾದ ಎ.ಮಂಜುರವರು ಶ್ರವಣಬೆಳೆಗೊಳದಲ್ಲಿ ನೆರವೇರಿದ ವರ್ಣರಂಜಿತ ಸಮಾರಂಭದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರ ಸಮ್ಮುಖದಲ್ಲಿಬಿಡುಗಡೆ ಮಾಡಿದರು.
ಲಾಂಛನದ ಅನಾವರಣದ ನಂತರ ಮಾತನಾಡಿದ ಸ್ವಾಮೀಜಿಯವರು – “ಮಹೋತ್ಸವಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಶ್ರೀ ಎ.ಮಂಜುರವರು ನೀಡುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಸಹಕಾರದಿಂದ ಮಹೋತ್ಸವವು ವಿಜೃಂಭಣೆಯಿಂದ ಜರುಗುವುದು ಎಂದು ಆಶಿಸಿದರು”.
ಮಹೋತ್ಸವದ ಸಹ ಸಂಚಾಲಕರಾದ ಶ್ರೀ ಪಿ.ವೈ.ರಾಜೇಂದ್ರ ಕುಮಾರ್ ರವರು ಗಣ್ಯರನ್ನು ಸ್ವಾಗತಿಸಿದರು. ಶ್ರವಣಬೆಳಗೊಳದ ಶಾಸಕರಾದ ಶ್ರೀ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಎ.ಗೋಪಾಲಸ್ವಾಮಿ, ಹಾಸನ ಜಿಲ್ಲಾಧಿಕಾರಿ ಚೈತ್ರಾ ವಿ. ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. – ವರದಿ: ಶ್ರೀ ರಾಮದಾಸ್, ಶ್ರವಣಬೆಳಗೊಳ; ಹೆಚ್.ಪಿನಿತಿನ್, ಬೆಂಗಳೂರು.