ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ‘ಭಗವಾನ್‌ ಬಾಹುಬಲಿಗೆ ಜೈ’ ಎಂಬ ಘೋಷಣೆ ಮೊಳಗಿತು.

ಯಶವಂತಪುರ–ಹಾಸನ ರೈಲು ಮಾರ್ಗದಲ್ಲಿ ಭಾನುವಾರ ಸಂಚಾರ ಆರಂಭಿಸಿದ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೂಜೆ ಸಲ್ಲಿಸಿದರು.
ಯಶವಂತಪುರ–ಹಾಸನ ರೈಲು ಮಾರ್ಗದಲ್ಲಿ ಭಾನುವಾರ ಸಂಚಾರ ಆರಂಭಿಸಿದ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಶ್ರವಣಬೆಳಗೊಳ, ಮಾರ್ಚ್ ೨೬, ೨೦೧೭: ಯಶವಂತಪುರ–ಹಾಸನ ರೈಲು ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಆರಂಭಗೊಳ್ಳುವ ಮೂಲಕ ಎರಡು ದಶಕಗಳ ಕನಸು ನನಸಾಯಿತು.

ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಟ ರೈಲು ಮಧ್ಯಾಹ್ನ 3.15ಕ್ಕೆ ಶ್ರವಣಬೆಳಗೊಳ ತಲುಪಿತು.

ಬೆಂಗಳೂರಿನಿಂದ ಪ್ರಯಾಣಿಕರೊಂದಿಗೆ ರೈಲಿನಲ್ಲಿ ಸಚಿವ ಎ.ಮಂಜು, ಶಾಸಕರಾದ ಎಚ್‌.ಡಿ.ರೇವಣ್ಣ ಮತ್ತು ಬಾಲಕೃಷ್ಣ ಸಹ ಪ್ರಯಾಣಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ‘ಭಗವಾನ್‌ ಬಾಹುಬಲಿಗೆ ಜೈ’ ಎಂಬ ಘೋಷಣೆ ಮೊಳಗಿತು.

ನಂತರ ಮಾತನಾಡಿದ ಸ್ವಾಮೀಜಿ, ರೈಲಿಗೆ ಗೊಮ್ಮಟೇಶ್ವರ ಹೆಸರು ಇಟ್ಟಿರುವುದಕ್ಕೆ ಸಂತಸವಾಗಿದೆ. ರೈಲು ಓಡಾಟದಿಂದ ಮುಂದಿನ ವರ್ಷ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚು ಮಂದಿ ಭೇಟಿ ನೀಡಲು ಅನುಕೂಲವಾಗುತ್ತದೆ. ಜತೆಗೆ, ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಯೋಜನೆ ಸಾಕಾರಕ್ಕೆ ಶ್ರಮಿಸಿದ ಸಂಸದ

ಎಚ್‌.ಡಿ.ದೇವೇಗೌಡ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದರು. ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಸ್ವಾಗತ ಕೋರಲು ನಿಲ್ಲಿಸುತ್ತಿದ್ದ ಕಾರಣ ನಿಗದಿತ ಸಮಯಕ್ಕಿಂತ ಮೂರು ತಾಸು ತಡವಾಗಿ ಹಾಸನವನ್ನು ರೈಲು ತಲುಪಿತು. – ಸುದ್ದಿ ಹಾಗೂ ಚಿತ್ರ ಕೃಪೆ: ಪ್ರಜಾವಾಣಿ