ಪರರ ಸಕಲ ಸಂಕಷ್ಟಗಳನ್ನು ದೂರ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಹಲವು ಕಾರಣಗಳಿಂದ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಉಚಿತ ಕೃತಕ ಕಾಲುಗಳನ್ನು ವಿತರಿಸಿ ಅವರ ಸಂಕಷ್ಟಗಳನ್ನು ದೂರ ಮಾಡುವುದು ನಮ್ಮ ಉದ್ದೇಶವಾಗಿದೆ.
ಶ್ರವಣಬೆಳಗೊಳ, ಏಪ್ರಿಲ್ ೨, ೨೦೧೬: ‘ಕ್ಷೇಮಂ ಸರ್ವ ಪ್ರಜಾನಾಂ’ ಎಂಬಂತೆ ಎಲ್ಲ ಪ್ರಜೆಗಳೂ ಕ್ಷೇಮದಿಂದ ಇರಬೇಕು ಎಂಬುದು ಎಲ್ಲರ ಭಾವನೆಯಾಗಬೇಕು ಎಂದು ಶ್ರವಣಬೆಳಗೊಳ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜನಕಲ್ಯಾಣ ಯೋಜನೆಯಡಿ ಭಾನುವಾರ ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಏರ್ಪಡಿಸಿದ್ದ ಉಚಿತ ಕೃತಕ ಕಾಲು ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರರ ಸಕಲ ಸಂಕಷ್ಟಗಳನ್ನು ದೂರ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಹಲವು ಕಾರಣಗಳಿಂದ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಉಚಿತ ಕೃತಕ ಕಾಲುಗಳನ್ನು ವಿತರಿಸಿ ಅವರ ಸಂಕಷ್ಟಗಳನ್ನು ದೂರ ಮಾಡುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ಈ ಯೋಜನೆಯನ್ನು ದೀಪಾವಳಿವರೆಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಜನಕಲ್ಯಾಣ ಉಪಸಮಿತಿಯ ಸಹ ಸಂಯೋಜಕ ಎಸ್.ಎ.ಸಚಿನ್ ಜೈನ್, ಒಟ್ಟು 62 ಜನರಿಗೆ ಕೃತಕ ಕಾಲುಗಳನ್ನು ವಿತರಿಸಿದ್ದು, ಅದರಲ್ಲಿ ಇಬ್ಬರಿಗೆ ಜೋಡಿ ಕೃತಕ ಕಾಲುಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಆಚಾರ್ಯ ಚಂದ್ರಪ್ರಭಸಾಗರ ಸ್ವಾಮೀಜಿ, ಶಿಬಿರದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಬೆಂಗಳೂರಿನ ಸಿ.ಬಿ.ಭಂಡಾರಿ ಪರಿವಾರದ ಕರ್ನಾಟಕ ಮಾರ್ವಾಡಿ ಯೂಥ್ ಫೆಡರೇಷನ್ನ ಬಿ.ಚಂಪಾಲಾಲ್ ಭಂಡಾರಿ, ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ವೈಧ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್ ಮಾತನಾಡಿದರು.
ಪಾವನಕೀರ್ತಿ ಮಹಾರಾಜರು, ಆರ್ಯಿಕಾಶ್ರಿ ಕುಂದಶ್ರೀ ಮಾತಾಜಿ, ಆರ್ಯಿಕಾಶ್ರಿ ಸುಪ್ರಭಾಮತಿ ಮಾತಾಜಿ, ಮುನಿಶ್ರಿ ಜ್ಷಾನಭೂಷಣ ಮಹಾರಾಜರು, ಆರ್ಯಿಕಾಶ್ರಿ ಶಿವಮತಿ ಮಾತಾಜಿ, ಬಾಹುಬಲಿ ಮಕ್ಕಳ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ.ಡಿ. ಪ್ರಭಾಮಂಡಲ್, ಡಾ.ಓಂಕಾರಪ್ಪ, ಡಾ.ಜಿ.ಎಸ್.ಬ್ರಹ್ಮರಾಜ್, ಡಾ.ಪಾರ್ಶ್ವ ನಾಥ್, ಎಸ್.ಡಿ.ಫಣೀಂದ್ರಕುಮಾರ್, ಜಿ.ಡಿ.ಪಾರ್ಶ್ವನಾಥ್, ಕೆ.ಪದ್ಮರಾಜ್, ಎಸ್.ಎನ್. ಅಶೋಕ್ಕುಮಾರ್ ಇದ್ದರು. – ಸುದ್ದಿ ಹಾಗೂ ಚಿತ್ರ ಕೃಪೆ: ಪ್ರಜಾವಾಣಿ