ಹೆಲಿಕಾಪ್ಟರ್ನಲ್ಲಿ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ಬೆಳಿಗ್ಗೆ 11ಗಂಟೆಗೆ ಕರ್ನಾಟಕ ಜೈನ್ ಅಸೋಸಿಯೇಷನ್ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 12 ಗಂಟೆಗೆ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ರೂಪಿಸಿರುವ ವೇದಿಕೆಯಲ್ಲಿ ಮಹಮಸ್ತಕಾಭಿಷೇಕ ನಿಮಿತ್ತ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಚಾಲನೆ ನೀಡುವರು.
ಶ್ರವಣಬೆಳಗೊಳ, ಏಪ್ರಿಲ್ ೨೩, ೨೦೧೭: 2018ರ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಂಕುಸ್ಥಾಪನೆ ನೆರವೇರಿಸುವರು.
ಹೆಲಿಕಾಪ್ಟರ್ನಲ್ಲಿ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ಬೆಳಿಗ್ಗೆ 11ಗಂಟೆಗೆ ಕರ್ನಾಟಕ ಜೈನ್ ಅಸೋಸಿಯೇಷನ್ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಮಧ್ಯಾಹ್ನ 12 ಗಂಟೆಗೆ ಬಾಹುಬಲಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ರೂಪಿಸಿರುವ ವೇದಿಕೆಯಲ್ಲಿ ಮಹಮಸ್ತಕಾಭಿಷೇಕ ನಿಮಿತ್ತ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಚಾಲನೆ ನೀಡುವರು.
ಅಂತರ ರಾಷ್ಟ್ರೀಯ ಪ್ರವಾಸಿ ಮಂದಿರ, 5 ಹೆಚ್ಚುವರಿ ಮತ್ತು 10 ಹೆಚ್ಚುವರಿ ವಿವಿಐಪಿ ಗಣ್ಯಾತಿಗಣ್ಯರ ಪ್ರವಾಸಿ ಮಂದಿರ ವಿಸ್ತರಣಾ ಕಟ್ಟಡ,, 66/11 ಕೆ.ವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕಟ್ಟಡ ನಿರ್ಮಾಣ, ಹಾಲಿ ಬಸ್ ನಿಲ್ದಾಣದಲ್ಲಿ ಚಾಲಕರ ಡಾರ್ಮೆಟ್ರಿ ಕೊಠಡಿಗಳ ನಿರ್ಮಾಣ, 4 ತಾತ್ಕಾಲಿಕ ಬಸ್ ತಂಗುದಾಣಗಳ ನಿರ್ಮಾಣ, ಹಾಲಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿಗಳ ಮುಖ್ಯಮಂತ್ರಿ ಚಾಲನೆ ನೀಡುವರು.
ತದನಂತರ ಮಧ್ಯಾಹ್ನ 1.30ಕ್ಕೆ ಬರಪರಿಸ್ಥಿತಿ, ಪರಿಹಾರ ಕಾಮಗಾರಿ ಕುರಿತು ಹಾಸನ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ. ನಂತರ 3.15 ಕ್ಕೆ ಶ್ರವಣಬೆಳಗೊಳ ಹೆಲಿಪ್ಯಾಡ್ಗೆ ತೆರಳಿಗೆ ಬೆಂಗಳೂರಿಗೆ ನಿರ್ಗಮಿಸುವರು.
ಕಾರ್ಯಕ್ರಮಕ್ಕೆ 15,000 ಜನರು ಸೇರುವ ನಿರೀಕ್ಷೆ ಆಯೋಜಕರದು. ಅಷ್ಟೇ ಸಂಖ್ಯೆ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಭದ್ರತೆ: ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು 500 ಮಂದಿಯನ್ನು ಭದ್ರತೆ ನಿಯೋಜಿಸಲಾಗಿದೆ. ಐಜಿ ಮತ್ತು ಎಸ್ಪಿ ಭದ್ರತೆ ಉಸ್ತುವಾರಿ ಹೊಂತಿದ್ದು, ತಲಾ ಒಬ್ಬರು ಎಎಸ್ಪಿ, ಹೆಚ್ಚುವರಿ ಎಎಸ್ಪಿ, ಡಿಎಸ್ಪಿ ಹಾಗೂ ಮೂವರು ಸಿಪಿಐ, 12 ಮಂದಿ ಪಿಎಸ್ಐ, 65 ಮಂದಿ ಎಎಸ್ಐ, ಹಾಗೂ 400 ಮಂದಿ ಕಾನ್ಸ್ಟೆಬಲ್ ನಿಯೋಜಿಸಲಾಗಿದೆ. – ಸುದ್ದಿ ಹಾಗೂ ಚಿತ್ರಕೃಪೆ: ಪ್ರಜಾವಾಣಿ